Thursday, November 26, 2009

ನಿನಗಾಗಿ ಕಾದಿರುವೆ.......











ಅತ್ತಿತ್ತ ಸುಳಿಯುತ ನನ್ನತ್ತ ನೋಡದೆ,
ಹತ್ತೂರ ಸುತ್ತಿದರು
ಮತ್ತಾರು ಪ್ರೀತಿಸುವರು ನನ್ನಷ್ಟು ನಿನ್ನ,
ಬಂದೊಮ್ಮೆ ನನ್ನೆಡೆಗೆ ನೀನಾಗು ಎನ್ನ.

ನಿನಗಾಗಿ ಹಾತೊರೆದು, ಕಣ್ತೆರೆದು ಕಾಣುವ
ಕನಸುಗಳು ಮುಗಿಯುವ ಮುನ್ನ,
ನನಸಾಗಿ ಬಂದು ನೀ ಎಬ್ಬಿಸು ಎನ್ನ.

ನಿನಗಾಗಿ ಕಾದಿರುವೆ….
ಪ್ರೀತಿಸುವೆ,ಪೂಜಿಸುವೆ ಕೊನೆವರೆಗೂ ನಿನ್ನ.
ನೀ ಬಂದು ಜೀವನದಿ ಅರ್ಥೈಸು ಎನ್ನ,
ಸಂತೈಸು ಎನ್ನ, ಓ ನನ್ನ ಚಿನ್ನ.