Wednesday, October 3, 2012

ನನ್ನವಳ ಮನೆ ಎದಿರು ನಾ ನಿಂತು ಕಾಯುವೆನು,

ನನ್ನವಳ ಮನೆ ಎದಿರು ನಾ ನಿಂತು ಕಾಯುವೆನು,
ಮನದ ಮಾತನೆಲ, ಮನದಲೆ ಅವಿತಿಟ್ಟು,
ನನ್ನವಳ ಮನೆ ಎದಿರು ನಾ ನಿಂತು ಕಾಯುವೆನು,

ನನಗವಳು ಕಂಡಾಗ, ಅರುಶದಲಿ ನಲಿದಾಡಿ,
ಮತ್ತವಳ ನೋಡಲು, ಅತಿತ್ತ ಅಲೆದಾಡಿ,
ನನ್ನವಳ ಮನೆ ಎದಿರು ನಾ ನಿಂತು ಕಾಯುವೆನು,

ಭಾನಗಲ ಪ್ರೀತಿಯ, ಭಾವದಲಿ ತುಂಬಿ ನಾ
ಕಣ್ಣಲೆ ಎಲ್ಲವನು ಏಳುವ ಹಂಬಲ್ಲದಿ,
ನನ್ನವಳ ಮನೆ ಎದಿರು ನಾ ನಿಂತು ಕಾಯುವೆನು,

ಆಗೊಮ್ಮೆ ಹೀಗೊಮ್ಮೆ ಅಂಗಳಕೆ ಬಂದವಳು,
ಏನು ಅರಿಯದಹಾಗೆ ಹಾಗೇ ಹೋಳ ಹೋಗುವಳು,
ಒಂದೊಮ್ಮೆ ನನ್ನೆಡೆಗೆ ಬಂದವಳು ಕೇಳುವಳು,
ನೀನೇಕೆ ಹಿಗಿಲ್ಲಿ ನಿಂತಿರುವೆ ? ಎಂದು .
ನಿನಗೇನೂ ಬೇಕು ಹೇಳೆನಗೆ ಎಂದು.

ನಾ ನುಡಿವೆ, ನನ್ನೊಡತಿ ನಿನ್ನ ಪ್ರೀತಿ ಬೇಕೆಂದು,
ಕಾಯುತಿಯೆ ನಾನದಕೆ ನೀಡೆನಗೆ ಎಂದು, ನೀಡೆನಗೆ ಎಂದು.

ನನ್ನವಳ ಮನೆ ಎದಿರು ನಾ ನಿಂತು ಕಾಯುವೆನು,
ಮನದ ಮಾತನೆಲ, ಮನದಲೆ ಅವಿತಿಟ್ಟು,
ನನ್ನವಳ ಮನೆ ಎದಿರು ನಾ ನಿಂತು ಕಾಯುವೆನು,

No comments:

Post a Comment