ಮುನಿಯದಿರು ನನ್ನೊಲವೆ,
ಮೌನಿಯಾಗಿರುವೆ ನಾ,
ಮಾತನಾಡದೆ ಏನೂ
ಬರಿ ನಿನ್ನೆಡೆಗೆ ನೋಡುತಲಿ.
ನೀ ನನ್ನ ಜೊತೆಯಲಿ,
ಇದ್ದೆಲ್ಲ ಕ್ಷಣಗಳ ನೆನಪಿನ
ದೋಣಿಯಲಿ ತೇಲುತ,
ಮೌನಿಯಾಗಿರುವೆ ನಾ,
ಮಾತನಾಡದೆ ಏನೂ,
ಬರಿ ನಿನ್ನೆಡೆಗೆ ನೋಡುತಲಿ
ಹುಣ್ಣಿಮೆಯ ರಾತ್ರಿಯಲಿ
ಚಂದ್ರ, ಚುಕ್ಕಿಯ ತೋರಿ,
ಬೆಳೆದಿಂಗಳಲಿ ಮೈ ಮರೆತ
ದಿನವ ನೆನೆದು,
ನಾ ಮೌನಿಯಾಗಿರುವೆ,
ಮಾತನಾಡದೆ ಏನೂ,
ಬರಿ ನಿನ್ನೆಡೆಗೆ ನೋಡುತಲಿ.
ನಮ್ಮೂರ ಜಾತ್ರೆಯಲಿ,
ಹತ್ತೂರ ಜನರೆದುರು,
ನಿನ್ನ ಹಿಂದೆ ಸುಳಿದ ಕ್ಷಣಗಳೆಲ್ಲ,
ಮತ್ತೆ ಮರುಕಲಿಸುತಿರೆ,
ನಾ ಮೌನಿಯಾಗಿರುವೆ,
ಮಾತನಾಡದೆ ಏನೂ,
ಬರಿ ನಿನ್ನೆಡೆಗೆ ನೋಡುತಲಿ.
ನೀ ಮುನಿಯುತಿಹೆ ಹೀಗೆ
ಮಾತಾಡದೆ ಏನೂ,
ನಿನ್ನ ಮೌನವಿದು ನನ್ನನೊಮ್ಮೆ
ಕೊಲ್ಲುವುದು,
ಆದರು ನನ್ನೊಲವು ನಿನಗಾಗಿ ಕಾಯುತಲಿ,
ಇಲ್ಲಿಯೇ ನಿಲ್ಲುವುದು.
ಮುನಿಯದಿರು ನನ್ನೊಲವೆ,
ಮೌನಿಯಾಗಿರುವೆ ನಾ,
ಮಾತನಾಡದೆ ಏನೂ
ಬರಿ ನಿನ್ನೆಡೆಗೆ ನೋಡುತಲಿ.
Tuesday, January 5, 2010
Subscribe to:
Post Comments (Atom)
No comments:
Post a Comment