Tuesday, January 19, 2010

ಬೆಳ್ಳಿ ಬೆಟ್ಟದ ಮೇಲೆ

ಬೆಳ್ಳಿ ಬೆಟ್ಟದ ಮೇಲೆ
ಬೆಳ್ ಮುಗಿಲಾ ಮಾಲೆ,
ನಿನಗಾಗಿ ನಾನು ತರಲೆ ಹೇಳೇ.

ಮುಗಿಲಲ್ಲಿ ನಕ್ಷತ್ರಗಳ ಓಲೆ,
ನಿನಗಾಗಿ ನಾನು ತರಲೆ ಹೇಳೇ.

ನಿನ್ನ ಹೊತ್ತುತಿರುಗುವೆ ನಲ್ಲೆ ಚಂದ್ರನಮೇಲೆ,
ನೀ ಬರುವೆಯ ನನ್ನೊಡನೆ ಹೇಳೇ ?

ನಿನಲ್ಲಿ ಬಂದರೆ ಚಲುವೆ,
ನಾ ಸ್ವತ್ತಿ ಮುತ್ತನು ತಂದು ನಿನ್ನ ಮಡಿಲಿಗೆ ಹಿಡುವೆ, ಕೇಳೆ !

ನಿನೋಪಿದರೆ ಓ ಚಲುವೆ,
ನನ್ನೆಲಾ ಒಲವನು ಬಳುವಳಿಯಾಗಿ ಕೊಡುವೆ,
ನಿನ್ನ ಬಾಳ ಸಂಗತಿಯಾಗಿ ಇರುವೆ ಹೇಳೇ ?

ಬೆಳ್ಳಿ ಬೆಟ್ಟದ ಮೇಲೆ
ಬೆಳ್ ಮುಗಿಲಾ ಮಾಲೆ,
ನಿನಗಾಗಿ ನಾನು ತರಲೆ ಹೇಳೇ

Wednesday, January 6, 2010

ನನ್ನಗರ್ಥ ವಾಗದ ಮಾತು



ನನ್ನಗರ್ಥ ವಾಗದ ಮಾತು,
ವ್ಯರ್ಥ ವಾಗುವ ಮುನ್ನ ,
ನೀ ತಿಳಿಸಿ ಹೇಳು ಬಾರೆ ಓ ಚಿನ್ನ.


ನಿನ್ನ ನಡೆ ಎಷ್ಟು ಚನ್ನ,
ವಯ್ಯಾರ ಬಿಡು ನೀ ಚಿನ್ನ ,
ಇದರಿಂದಾ ಯಾಕೆ ಕೊಲ್ತಿ ನನ್ನನ್ನಾ.


ನಿನ್ನ ಕೈಯ ಬಳೆಗಳನಾದ,
ಕಾಲ್ ಗೆಜ್ಜೆಯ ನಿನಾದ ,
ಯೆನ್ನೇನೋ ನುಡಿದಿದೆ,
ನಾ ನೊಂದನು ಅರಿಯೇನಾ !


ನಿನ್ನ ಮಾತು ಎಷ್ಟು ಚನ್ನ ,
ಮೌನಾನ ಬಿಡು ನಿ ಚಿನ್ನ,
ಹಿಗೇಳು ನಾ ನಿನಗೆ ಇಷ್ಟ ನಾ ?


ನನ್ನಗರ್ಥ ವಾಗದ ಮಾತು ,
ವರ್ಥ ವಾಗುವ ಮುನ್ನ ,
ನೀ ತಿಳಿಸಿ ಹೇಳು ಬಾರೆ ಓ ಚಿನ್ನ.


ಅರ್ಥವಾಗದ ನಗುವಿದು ನನಗು ನಿನಗೂ

ಅರ್ಥವಾಗದ ನಗುವಿದು ನನಗು ನಿನಗೂ,


ಈ ತುಟಿಗಳ ಅಂಚಲಿ ಮಿನುಗುತಿಹುದು,
ಏನೋ ಸನ್ನೆ ಮಾದುತಿಹುದು,
ಅರ್ಥವಾಗದ ನಗುವಿದು ನನಗು ನಿನಗೂ.


ಮನದೊಳಗೆನೋ ನುಡಿಯುತಿಹುದು,
ಪ್ರೇಮದ ತಂತಿಯ ಮಿಡಿಯುತಿಹುದು,
ಮೃದುವಾದ ನಾದವ ಹೊಮ್ಮಿಸಿ
ನಮ್ಮಿಬರನು ಇಲ್ಲಿ ಬಂದಿಸಿಹುದು,
ಅರ್ಥವಾಗದ ನಗುವಿದು ನನಗು ನಿನಗೂ

ಪ್ರತಿ ಮಾತಿಗೊಮ್ಮೆ ಬಂದೊಗುವುದು,

ಪ್ರತಿ ನೋಟಕೊಮ್ಮೆ ಕಾಣಿಸುವುದು,
ಪ್ರತಿ ಉಸಿರಿಗೊಮ್ಮೆ ಹಸಿರಾಗುವುದು,
ಪ್ರತಿ ಹೆಜ್ಜೆಗೊಮ್ಮೆ ಕಾಲ್ಗೆಜ್ಜೆಯಂತೆ ಝೆ೦ಕರಿಸುವುದು,



ಅರ್ಥವಾಗದ ನಗುವಿದು ನನಗು ನಿನಗೂ


ನಾ ಕವಿಯದೆ ನಿನ್ನಿಂದ

ನಾ ಕವಿಯದೆ ನಿನ್ನಿಂದ,
ನಿನಗೊಂದು ಕವಿತೆ ಬರೆದೆ.


ಆ ಕವಿತೆಯ ಪ್ರತಿ ಪದವನ್ನು
ಮನಸಾರೆ ಪೋಣಿಸಿರುವೆ,
ನಿನಗೆಂದೇ ರೂಪಿಸಿರುವೆ,


ನನ್ನ ಮನದೆಲ್ಲಾ ಕೋರಿಕೆಯನು,
ಅದರಲ್ಲಿ, ಅದರಲ್ಲೇ, ಸಲ್ಲಿಸಿರುವೆ.
ನಿನ್ನುತ್ತರಕೆ ಕಾಯುತಿರುವೆ ?


ನಾ ಕವಿಯದೆ ನಿನ್ನಿಂದ,
ನಿನಗೊಂದು ಕವಿತೆ ಬರೆದೆ.

ಹೊಹಿತೊಂದು ಜೀವ ಮುಕ್ತಿಯಹಿತಿಂದು

ಹೊಹಿತೊಂದು ಜೀವ ಮುಕ್ತಿಯಹಿತಿಂದು,
ಮುಗಿಲ ಮುಟ್ಟಿ ಬಾನ ಚಿಕ್ಕಿಯಹಿತಿಂದು,


ಭೂಮಿಯಲಿತ್ತು ಇಷ್ಟು ಹೊತ್ತು,
ಪಂಚೇಂದ್ರಿಯಗಳ ಬಂದನದಲಿ ಸಿಲುಕಿ,
ಬಳುವುದನು ಹರಿತು, ಮಿನುಗುವುದನ್ನು ಮರೆತು,
ಅಲೆಯುತ್ತಿತ್ತು ಅತ್ತ, ಇತ್ತ,
ಶಾಂತಿಗಾಗಿ ಸ್ವಲ್ಪ ವಿಶ್ರಾಂತಿಗಾಗಿ.

ಮನಸಾಯ್ತು ಹುಚ್ಚು ಕುದುರೆ ಸಾದನೆಯ ಹಾದಿಯಲಿ

ಸಾಗಿಹುದು ಸಾಗಿಹುದು ಸಾಗರವ ಸೀಳಿ,
ಸೂರ್ಯನೆದುರಗಿರಲು ಸೋಲದ ಚಾಳಿ,
ಓಡಿಹುದು ನಿರ್ಮಿಸುತ ತನ್ನಯಾ ಚಾಪ್ಪು,
ನೋಡಿ ನಿಬ್ಬೆರೆಗಗಿರಲು ಸುಳಿಯುವಾ ಗಾಳಿ.


ವಯಸಾಯ್ತು ಹಧಿನೆಂಟು ನಮ್ಮ ಹುಡುಗನಿಗೀಗ,
ಮನಸಾಯ್ತು ಹುಚ್ಚು ಕುದುರೆ,
ಎಲ್ಲ ಎಲ್ಲೆಯ ಮೀರಿ
ಹಾರಿ ಹೋಗುವ ಆಸೆ,
ಮನಸಾಯ್ತು ಹುಚ್ಚು ಕುದುರೆ.


ಹಗಲೆನ್ನದೆ, ಇರುಳೆನ್ನದೆ, ಮಳೆಗಳಿಗೆದುರದೆ.
ಬಿರುಬಿಸಿಲೋ, ಬರಸಿಡಿಲೊ, ಒಂದು ಲೆಕ್ಕಿಸದೆ.
ಬಲು ದೂರ, ಬಲು ದೂರ, ಹೋಗುತಿರೆ ನೋಡು.
ಮರೆಯದಿರು, ಮರೆಯದಿರು, ನಿನ್ನಯ ಗೂಡು.


ಸತ್ಯ, ಅಸತ್ಯತೆಗಳ ಸುಳಿಗೆಂದು ಸಿಲುಕದೆ.
ಸೋಲುಗೆಲುವೆಮ್ಬುದರ ಭಯಕೆಂದು ಅಳುಕದೆ.
ನಿನ್ನಯಾ ಕಲ್ಪನೆಗೆ ನಿನೆಯೇ ನಿಲುಕದೇ.
ಸಗುತಿಯೇ, ಸಗುತಿಯೇ, ಸಗುತಿಯೇ ನೋಡು.


ಯಾರ ಹಂಗು ನಿನಗಿಲ್ಲ,
ಸತ್ತರು ಸೋಲೋಲ,
ಮತ್ತಿತರರಿಗಂತೂ ಮಣಿಯುವುದೇ ಇಲ್ಲ,
ನೀ ದಣಿಯುವುದೆ ಇಲ್ಲ,
ಸಾಗಿಹುದು ಸಾಗಿಹುದು ಸಾಗರವ ಸೀಳಿ......

Tuesday, January 5, 2010

ಮುನಿಯದಿರು ನನ್ನೊಲವೆ

ಮುನಿಯದಿರು ನನ್ನೊಲವೆ,
ಮೌನಿಯಾಗಿರುವೆ ನಾ,
ಮಾತನಾಡದೆ ಏನೂ
ಬರಿ ನಿನ್ನೆಡೆಗೆ ನೋಡುತಲಿ.

 ನೀ ನನ್ನ ಜೊತೆಯಲಿ,
ಇದ್ದೆಲ್ಲ ಕ್ಷಣಗಳ ನೆನಪಿನ
ದೋಣಿಯಲಿ ತೇಲುತ,
ಮೌನಿಯಾಗಿರುವೆ ನಾ,
ಮಾತನಾಡದೆ ಏನೂ,
ಬರಿ ನಿನ್ನೆಡೆಗೆ ನೋಡುತಲಿ

ಹುಣ್ಣಿಮೆಯ ರಾತ್ರಿಯಲಿ
ಚಂದ್ರ, ಚುಕ್ಕಿಯ ತೋರಿ,
ಬೆಳೆದಿಂಗಳಲಿ ಮೈ ಮರೆತ
ದಿನವ ನೆನೆದು,
ನಾ ಮೌನಿಯಾಗಿರುವೆ,
ಮಾತನಾಡದೆ ಏನೂ,
ಬರಿ ನಿನ್ನೆಡೆಗೆ ನೋಡುತಲಿ.

ನಮ್ಮೂರ ಜಾತ್ರೆಯಲಿ,
ಹತ್ತೂರ ಜನರೆದುರು,
ನಿನ್ನ ಹಿಂದೆ ಸುಳಿದ ಕ್ಷಣಗಳೆಲ್ಲ,
ಮತ್ತೆ ಮರುಕಲಿಸುತಿರೆ,
ನಾ ಮೌನಿಯಾಗಿರುವೆ,
ಮಾತನಾಡದೆ ಏನೂ,
ಬರಿ ನಿನ್ನೆಡೆಗೆ ನೋಡುತಲಿ.

ನೀ ಮುನಿಯುತಿಹೆ ಹೀಗೆ
ಮಾತಾಡದೆ ಏನೂ,
ನಿನ್ನ ಮೌನವಿದು ನನ್ನನೊಮ್ಮೆ
ಕೊಲ್ಲುವುದು,
ಆದರು ನನ್ನೊಲವು ನಿನಗಾಗಿ ಕಾಯುತಲಿ,
 ಇಲ್ಲಿಯೇ ನಿಲ್ಲುವುದು.

ಮುನಿಯದಿರು ನನ್ನೊಲವೆ,
ಮೌನಿಯಾಗಿರುವೆ ನಾ,
ಮಾತನಾಡದೆ ಏನೂ
ಬರಿ ನಿನ್ನೆಡೆಗೆ ನೋಡುತಲಿ.